೧೭೧೪-೯೫ : ಇಟಲಿಯಭೂವಿಜ್ಞಾನಿ. ಕೇಪ್ರಿನೊ ಎಂಬಲ್ಲಿ ಜನಿಸಿದ. ಉತ್ತರ ಇಟಲಿಯಲ್ಲಿ ಕಂಡುಬರುವ ಶಿಲೆಗಳ ವರ್ಗೀಕರಣಕ್ಕೆ ಈತ ಹೆಸರು ಗಳಿಸಿದ್ದಾನೆ. ಇವುಗಳಲ್ಲಿ ಪ್ರಾಥಮಿಕಶಿಲೆಗಳು (ಪ್ರೈಮರಿ ರಾಕ್ಸ್), ದ್ವಿತೀಯಕ ಶಿಲೆಗಳು (ಸೆಕೆಂಡರಿ ರಾಕ್ಸ್) ಮತ್ತು ತೃತೀಯಕ ಶಿಲೆಗಳು (ಟರ್ಷಿಯರಿ ರಾಕ್ಸ್) ಎಂಬುವೇ ಈತ ಮಾಡಿದ ವರ್ಗೀಕರಣ. ಅಗ್ನಿಪರ್ವತಗಳ ಬಗ್ಗೆ ಅನೇಕ ಕೃತಿಗಳನ್ನು ಈತ ರಚಿಸಿದ್ದಾನೆ.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ